101+ Sarvagna Vachanagalu | ಸರ್ವಜ್ಞನ ತ್ರಿಪದಿ ವಚನಗಳು
ಇಲ್ಲಿ ನಾವು ೧೦೧ Sarvagna ವಚನಗಳನ್ನು (Sarvagna Vachanagalu)ಸಂಗ್ರಹಿಸಿದ್ದೇವೆ. ನೀವು ಈ Sarvagna ತ್ರಿಪದಿ ವಚನಗಳನ್ನು ಎಲ್ಲಿಯೂ ಕೂಡ ಉಪಯೋಗಿಸಬಹುದು.
ವಚನಗಳನ್ನು ನೀವು copy ಕೂಡ ಮಾಡಬಹದು ಮತ್ತು ಇದರ ಜೊತೆಗೆ ನಾವು Sarvagna ವಚನಗಳ ಚಿತ್ರವೂ ಕೊಟ್ಟಿದ್ದೇವೆ ಅದನ್ನು ನೀವು download ಕೂಡ ಮಾಡಬಹದು.
ಸರ್ವಜ್ಞ ಕನ್ನಡ ಸಾಹಿತ್ಯದ ಅತ್ಯಂತ ಪ್ರಸಿದ್ಧ ಮತ್ತು ಜ್ಞಾನಿ ಕವಿಗಳಲ್ಲಿ ಒಬ್ಬರಾಗಿದ್ದಾರೆ. ಈ ಸಂಗ್ರಹದಲ್ಲಿ ನೀವು ಸರ್ವಜ್ಞನ ಅಮೂಲ್ಯ ತ್ರಿಪದಿ ವಚನಗಳನ್ನು (Sarvagna Vachanagalu) ಕನ್ನಡದಲ್ಲಿ ಕಾಣಬಹುದು, ಇವು ಜೀವನದ ಮೌಲ್ಯಗಳು, ನೀತಿ ಮತ್ತು ಸಾಮಾಜಿಕ ಜಾಗೃತಿಯ ಬಗ್ಗೆ ಆಳವಾದ ಅಂತರ್ದೃಷ್ಟಿಯನ್ನು ನೀಡುತ್ತವೆ. ಪ್ರತಿಯೊಂದು ತ್ರಿಪದಿಯು ಮೂರು ಸಾಲುಗಳಲ್ಲಿ ಗಹನವಾದ ವಿಷಯವನ್ನು ಸರಳವಾಗಿ ವಿವರಿಸುತ್ತದೆ, ಮಾನವ ಸ್ವಭಾವ, ಸಮಾಜ ಮತ್ತು ನೈತಿಕತೆಯ ವಿಷಯಗಳನ್ನು ಸ್ಪರ್ಶಿಸುತ್ತದೆ. ನೀವು ಇನ್ನಷ್ಟು ವಚನ ಸಾಹಿತ್ಯವನ್ನು ಓದಲು ಬಯಸಿದರೆ, ನಮ್ಮ ಬಸವಣ್ಣನ ವಚನಗಳು ಮತ್ತು ಅಕ್ಕಮಹಾದೇವಿ ವಚನಗಳು ಕೂಡ ನೋಡಬಹುದು. ಬನ್ನಿ, ಸರ್ವಜ್ಞನ ಈ ಅಮೂಲ್ಯ ವಚನಗಳ ಮೂಲಕ ಜೀವನದ ಗಹನ ಸತ್ಯಗಳನ್ನು ಅರಿಯೋಣ.
ಸರ್ವಜ್ಞನ ವಚನಗಳು
1. ದೇಶಕ್ಕೆ ಸಜ್ಜನನು | ಹಾಸ್ಯಕ್ಕೆ ಹನುಮಂತ |
ಕೇಶವನು ಭಕ್ತರೊಳಗೆಲ್ಲ ಮೂರು ಕ |
ಣ್ಣೀಶನೇ ದೈವ ಸರ್ವಜ್ಞ ||
2. ಉಂಬಳಿಯ ಇದ್ದವನು | ಕಂಬಳಿಯ ಹೊದೆಯುವನೇ ? |
ಶಂಭುವಿರಲ್ಲಿಕ್ಕೆ ಮತ್ತೊಂದು ದೈವವ |
ನಂಬುವನೇ ಹೆಡ್ಡ ಸರ್ವಜ್ಞ ||
3. ಅಂಜದಲೆ ಕೊಂಡಿಹರೆ | ನಂಬು ಅಮೃತದಕ್ಕು |
ಅಂಜೆ ಅಳುಕುತಲಿ ಕೊಂಡಿಹರೆ, ಅಮೃತವು |
ನಂಜಿನಂತಕ್ಕು ಸರ್ವಜ್ಞ ||
4. ಎಂಜಲೂ ಅಶೌಚ |
ಸಂಜೆಯೆಂದೆನಬೇಡ ಕುಂಜರವು ವನವ ನೆನವಂತೆ ಬಿಡದೆನಿ |
ರಂಜನನ ನೆನಯೂ ಸರ್ವಜ್ಞ ||
5. ಭೂತೇಶನೆರಗುವನು | ಜಾತಿ ಮಾದಿಗನಲ್ಲ |
ಜಾತಿಯಲಿ ಹುಟ್ಟಿ ಶಿವನಿಗೆ ಶರಣೆನ್ನ |
ದಾತ ಮಾದಿಗನು ಸರ್ವಜ್ಞ ||
6. ಕುಲಗೆಟ್ಟವರು ಚಿಂತೆ | ಯೊಳಗಿಪ್ಪರಂತಲ್ಲ |
ಕುಲಗೆಟ್ಟ ಶಿವನ ಮರೆಹೊಕ್ಕು ಋಷಿಗಳಿಗೆ |
ಕುಲಗೊತ್ರವುಂಟೆ ? ಸರ್ವಜ್ಞ ||
7. ಜಾತಿಹೀನನ ಮನೆಯ | ಜ್ಯೋತಿ ತಾ ಹೀನವೆ ? |
ಜಾತಂಗೆ ಜಾತನೆನಲೇಕೆ ? ಅರುವಿಡಿ |
ದಾತನೇ ಜಾತ ಸರ್ವಜ್ಞ ||
8. ಯಾತರ ಹೂವೇನು ? ನಾತವಿದ್ದರೆ ಸಾಕು |
ಜಾತಿಯಲಿ ಜಾತಿಯೆನಬೇಡ ಶಿವನೊಲಿ |
ದಾತನೆ ಜಾತ ಸರ್ವಜ್ಞ ||
9. ಮಾಯ ಮೋಹವನೆಚ್ಚಿ | ಕಾಯುವನು ಕರಗಿಸುತೆ |
ಆಯಾಸಗೊಳುತಲಿರಬೇಡ ಓಂ ನಮಃ |
ಶಿವಾಯವೆಂದೆನ್ನು ಸರ್ವಜ್ಞ ||
10. ಅಕ್ಕರವು ತರ್ಕಕ್ಕೆ | ಲೆಕ್ಕವು ಗಣಿತಕ್ಕೆ |
ಮಿಕ್ಕವೋದುಗಳು ತಿರುಪೆಗೆ ಮೋಕ್ಷಕಾ |
ರಕ್ಕರವೆ ಸಾಕು ಸರ್ವಜ್ಞ ||
11. ಮುನಿವಂಗೆ ಮುನಿಯದಿರು | ಕನವಂಗೆ ಕನಿಯದಿರು |
ಮನಸಿಜಾರಿಯನು ಮರೆಯದಿರಿ ಶಿವಕೈಪೆ |
ಮನವು ಫನವಕ್ಕು ಸರ್ವಜ್ಞ ||
12. ಎಲ್ಲರನು ನೆರೆ ಬೇಡ | ಹಲ್ಲು ಬಾಯ್ದೆರೆಯುವರೇ ? |
ಬಲ್ಲಿದಾ ಶಿವನ ಭಜಸಿದರೆ ಶಿವ ತಾನು |
ಇಲ್ಲೆನ್ನಲರಿಯ ಸರ್ವಜ್ಞ ||
13. ನರರ ಬೇಡುವ ದೈವ | ಮರವೀಯ ಬಲ್ಲದೇ ? |
ತಿರಿವರೂಡನೆ ತಿರಿವರೇನದರಿತು |
ಹರನ ಬೇಡುವುದು ಸರ್ವಜ್ಞ ||
14. ಇಂದ್ರನಾನೆಯನೇರಿ | ಒಂದನೂ ಕೂಡಲರಿಯ |
ಚಂದ್ರಶೇಖರನು ಮುದಿ ಎತ್ತನ್ನೇರಿ ಬೇ |
ಕೆಂದುದನು ಕೂಡುವ ಸರ್ವಜ್ಞ ||
15. ಭ್ರಷ್ಟದೈವಕೆಬಾಯಿ ಬಿಟ್ಟಿಲ್ಲ ಫಲವಿಲ್ಲ |
ಸೃಷ್ಟಿಗೀಶ್ವರನ ಭಜಸಲು ಮುಂದಕ್ಕೆ |
ಇಷ್ಟಾರ್ಥವೀವ ಸರ್ವಜ್ಞ ||
16. ದೇಹಿಯೆನಬೇಡ ನಿ | ರ್ದೇಹಿ ಜಂಗಮದೇವ |
ದೇಹ ಗುಣದಾಸೆಯಳಿದಡೆಯಾತ ನಿ |
ರ್ದೇಹಿ ಕಾಣಯ್ಯ ಸರ್ವಜ್ಞ ||
17. ಸಾರವನು ಬಯಸುವರೆ | ಕ್ಷಾರವನು ಬೆರಿಸುವದು |
ಮಾರಸಂಹರನ ನೆನೆದರೆ ಮೃತ್ಯುವು |
ದೂರಕ್ಕೆ ದೂರ ಸರ್ವಜ್ಞ ||
18. ಕಾಯ ಕಮಲದ ಸಜ್ಜೆ | ಜೀವರತನುವ ಲಿಂಗ |
ಭಾವ ಪುಷ್ಟದಿಂ ಶಿವಪೂಜಿ ಮಾಡುವರೆ |
ದೇವರೆಂದೆಂಬ ಸರ್ವಜ್ಞ ||
19. ಓದು ವಾದಗಳೇಕೆ | ಗಾದಿಯ ಮಾತೇಕೆ |
ವೇದ ಪುರಾಣ ನೀನಗೇಕೆ ? ಲಿಂಗದಾ |
ಹಾದಿಯರಿದವಗೆ ಸರ್ವಜ್ಞ ||
20. ಒಪ್ಪಾದ ನುಡಿಯೇಕೆ ಪುಷ್ಪವೇರಿಸಲೇಕೆ ? |
ಅರ್ಪಿತನ ಗೂಡವೆ ತನಗೇಕೆ ? ಲಿಂಗದಾ |
ನೆಪ್ಪನರಿದವಗೆ ಸರ್ವಜ್ಞ ||
21. ಗಂಗೆ ಗೋದಾವರಿಯು | ತುಂಗಭದ್ರೆಯು ಮತ್ತೆ |
ಹಿಂಗದೆ ಮುಳಿಗಿ ಫಲವೇನು ? ನಿನ್ನಲೆ |
ಲಿಂಗದರುವಿಲ್ಲ ಸರ್ವಜ್ಞ ||
22. ಮೆಟ್ಟದಾ ಕಲ್ಲಿಂಗ | ಮೊಟ್ಟಿ ಪತ್ರಿಯ ಹಾಕಿ |
ಕಟ್ಟದಾ ಲಿಂಗ ಅಡಿಮಾಡಿ ಶರಣೆಂಬ |
ಭ್ರಷ್ಟನ ಕಂಡ್ಯಾ ? ಸರ್ವಜ್ಞ ||
23. ಗುರುವಿಂದ ಬಂಧಗಳು | ಗುರುವಿಂದ ದೈವಗಳು |
ಗುರುವಿಂದಲಿದುದು ಪುಣ್ಯವದು, ಜಗಕೆಲ್ಲ |
ಗುರುವಿಂದ ಮುಕ್ತಿ ಸರ್ವಜ್ಞ ||
24. ಶಿವಪೂಜೆ ಮಾಡಿದಡೆ | ಶಿವನ ಕೊಂಡಾಡಿದಡೆ |
ಶಿವನಲ್ಲಿ ನೆನಹ ನಿಲಿಸಿದಡೆ ಶಿವಲೋಕ |
ವವಗ ಕಾಣಯ್ಯ ಸರ್ವಜ್ಞ ||
25. ನಿಷ್ಠೆ ಇದ್ದಡೆ ಶಿವನು | ಗಟ್ಟಿಗೊಂಡೊಳಗಿರ್ಪ |
ನಿಷ್ಠೆಯಿಲ್ಲದಲೆ ಭಜಸಿದೊಡ ಶಿವನವನ |
ಬಿಟ್ಟು ಬಯಲಪ್ಪ ಸರ್ವಜ್ಞ ||
26. ಇಟ್ಟಾವಿಭೂತಿ ತಾ ಪಟ್ಟಗಟ್ಟಿರುತಿಕ್ಕು |
ಇಟ್ಟಾವಿಭೂತಿಯರಿಯದಿರೆ ಸೀಳಿದಾ |
ಬಟ್ಟೆಯಂತಕ್ಕು ಸರ್ವಜ್ಞ ||
27. ರುದ್ರಾಕ್ಷಿಭಸಿತವನು | ಹೊದ್ದಿರಲು ದೇಹದೂಳ |
ಗಿದ್ದ ಪಾಪಗಳ ಬಯಲಾಗಿ ಶಿವನು ತಾ |
ನಿದ್ದಲ್ಲಿ ಬರುವ ಸರ್ವಜ್ಞ ||
28. ಲಿಂಗದಲಿ ಮನವಾಗಿ | ಲಿಂಗದಲಿ ನೆನಹಾಗಿ
ಲಿಂಗದಲಿ ನೋಟ ನುಡಿಕೂಟವಾದವನು |
ಲಿಂಗವೇ ಅಕ್ಕು ಸರ್ವಜ್ಞ ||
29. ದೇಹಿಯನಬೇಡ | ನಿರ್ದೇಹಿ ಜಂಗಮಲಿಂಗ |
ದೇಹ ಗುಣದಾಸೆಯಳಿದೊಡೆ ಆತ ನೀ |
ರ್ದೇಹಿ ಕಾಣಯ್ಯ ಸರ್ವಜ್ಞ ||
30. ಲಿಂಗವೇ ದರುಶನವು | ಲಿಂಗವೇ ಸ್ಪರುಶನವು |
ಲಿಂಗ ಸಹ ಸರ್ಪ ಸುಖಭೋಗವಾದವನು |
ಲಿಂಗಕಾಣಯ್ಯ ಸರ್ವಜ್ಞ ||
31. ಲಿಂಗದಿಚ್ಛೆಗೆ ಹರಿದು | ಭಂಗಗೊಳದಿರು ಮನಜ
ಲಿಂಗದೊಳು ನೆನಹನಿರಿಸಿ ಸತ್ಯದ ನಿಲಲು |
ಲಿಂಗ ನೀನಪ್ಪೆ ಸರ್ವಜ್ಞ ||
32. ವಂಶವನು ಪುಗನೆಂದಿ | ಗಾಶಿಸನು ಪರಧನವ
ಸಂಶಯವನಳಿದ ನಿಜಸಿಖಿ ಮಹಾತ್ಮನು |
ಹಿಂಸೆಗೊಡಬಡನು ಸರ್ವಜ್ಞ ||
33. ಅರ್ಪಿತದ ಭೇದವನು |
ತಪ್ಪದಲೆ ತಿಳಿದಾತ ಸರ್ಪಭೂಷಣನ ಸಮನಹನು ನಿಜಸುಖಿದೊ |
ಳೊಪ್ಪುತ್ತಲಿಹನು ಸರ್ವಜ್ಞ ||
34. ಈಶಪ್ರಸಾದವನು | ಸೂಸದಲೆ ತಾ ಕೊಳ್ಳೆ |
ಶಾಶ್ವತವಾದ ಪದವಕ್ಕು ಜಗಕೆಲ್ಲ |
ಈಶ್ವರನೇ ಅಕ್ಕು ಸರ್ವಜ್ಞ ||
35. ಭೋಗಿಸುವ ವಸ್ತುಗಳ | ಭೋಗಿಸು ಶಿವಗಿತ್ತು |
ರಾಗದಿಂ ಸತ್ಯವೆರಸಿಹ ಪ್ರಸಾದಿಯ |
ಶ್ರೀ ಗುರುವ ಎಂಬೆ ಸರ್ವಜ್ಞ ||
36. ಲಿಂಗವಿರಹಿತನಾಗಿ | ನುಂಗದಿರು ಎನುವನು |
ತಿಂಗಳಲಿ ಸತ್ತ ಕೊಳೆ ನಾಯಿ ಮಾಂಸವನು |
ನುಂಗಿದೆಂತಕ್ಕು ಸರ್ವಜ್ಞ ||
37. ಅಂಜದಲೆ ಕೊಂಡಿಹರೆ | ನಂಜು ಅಮೃತವದಕ್ಕು |
ಅಂಜ್ಜಿ, ಅಳುಕುತಲಿ ಕೋಡಿಹರೆ ಅಮೃತವು |
ನಂಜಿನಂತಕ್ಕು ಸರ್ವಜ್ಞ ||
38. ಲಿಂಗಕ್ಕೆ ತೋರದಲಿ | ನುಂಗಗಿದಡೆ ಎನಹುದು ? |
ಭಂಗಬಂಧನವು ಫನವಹುದು ?
ಆ ಅಂಗ | ಹಿಂಗಿಹುದು ಸರ್ವಜ್ಞ ||
39. ಸಿರಿಯು ಬಂದರೆ ಲೇಸು | ತಿರದ ಜವ್ವನ ಲೇಸು |
ಮರಣವಿಲ್ಲದಾ ಮಗಲೇಸು ಲಿಂಗಕ್ಕೆ |
ಶರಣುವೇ ಲೇಸು ಸರ್ವಜ್ಞ ||
40. ಸೋಕಿದಾ ಸುಖಂಗಳ |
ನೇಕವನು ಶಿವಗಿತ್ತು |
ತಾ ಕಿಂಕರತೆಯ ಕೈಕೊಂಡ ಮನಜನೇ ಲೋಕಕ್ಕೆ ಶರಣ ಸರ್ವಜ್ಞ ||
41. ಮಲಯಜದ ಮರದೊಳಗೆ | ಸಲೆ ಗಂಧವಿಪ್ಪಂತೆ |
ಸುಲಲಿತವು ಆದ ಶರಣರಾಹೃದಯದಲಿ |
ನೆಲಸಿಹನು ಶಿವನು ಸರ್ವಜ್ಞ ||
42. ಕಿಚ್ಚಿನೊಳು ಸುಫೃತವು | ಒಚ್ಚತದಿ ಕರ್ಪುವರವು |
ಅಚ್ಚಳಿದು ನಿಜದಿ ನಿಂದಂತೆ, ಭೇದವನು |
ಮುಚ್ಚುವನೆ ಶರಣ ಸರ್ವಜ್ಞ ||
43. ಗಂಗೆಯಾ ತಡೆ ಲೇಸು | ಮಂಗಳನ ಬಲ ಲೇಸು |
ಜಂಗಮ ಭಕ್ತನಾ ನಡೆ ಲೇಸು, ಶರಣರಾ |
ಸಂಗವೇ ಲೇಸು ಸರ್ವಜ್ಞ ||
44. ಆಕಾಶಪಥ ವಿರಿ | ದೇಕವಸ್ತುವ ತಿಳಿದು |
ಸಾಕಾರವಳಿದು ನಿಜವಾದ ಐಕ್ಯಂಗೆ |
ಏಕತ್ರ ನೋಡು ಸರ್ವಜ್ಞ ||
45. ನಾನು-ನೀನುಗಳದು | ತಾನು ಲಿಂಗದ ಉಳಿದು |
ನಾನಾ ಭ್ರಮೆಗಳ ಅತಿಗಳೆದು ನಿಂದಾತ |
ತಾನೈಕ್ಯ ನೋಡು ಸರ್ವಜ್ಞ ||
46. ಹೀನಂಗೆ ಗತಿಯಿಲ್ಲ | ದೀನಗನುಚಿತವಲ್ಲ |
ಏನು ಇಲ್ಲದವಗೆ ಭಯವಿಲ್ಲ ಐಕ್ಕಂಗೆ |
ತಾನೆಂಬುದಿಲ್ಲ ಸರ್ವಜ್ಞ ||
47. ಆಗಿಲ್ಲ ಹೋಗಿಲ್ಲ | ಮೇಗಿಲ್ಲ ಕೆಳಗಿಲ್ಲ |
ತಾಗಿಲ್ಲ ತಪ್ಪು ತಡೆಯಿಲ್ಲ ಲಿಂಗಕ್ಕೆ |
ದೇಗುಲವೆ ಇಲ್ಲ ಸರ್ವಜ್ಞ ||
48. ಅಲಸದಾ ಶಿವಪೂಜೆ | ಹುಲುಸುಂಟು ಕೇಳಯ್ಯ |
ಬಲುಕವಲು ಒಡೆದು ಬೇರಿಂದ ತುದಿತನಕ |
ಹಲಸು ಕಾತಂತೆ ಸರ್ವಜ್ಞ ||
49. ಉಂಡುಂಡು ತಿರುಗುವಾ | ಭಂಡರಾ ಕಳೆ ಬೇಡಿ |
ಕಂಡು ಲಿಂಗವನು ಪೂಜಿಸದವಗೆ ಯಮ |
ದಂಡ ಕಾಣಯ್ಯ ಸರ್ವಜ್ಞ ||
51. ಸೃಷ್ಟಿಯೆಲ್ಲವನು ಮನ | ಮುಟ್ಟುವದು ನಿಮಿಷದಲಿ |
ನಟ್ಟು ಶಿವ-ಜೀವ-ವಿಷ ಮೂರೊಂದೆಂದು |
ದೃಷ್ಟಿಪನೆ ಶ್ರ್‍ಏಷ್ಠ ಸರ್ವಜ್ಞ ||
52. ಆತುಮದ ಲಿಂಗವನು |
ಪ್ರೀತಿಯಲಿ ಪೂಜಿಪಗೆ ಆತಂಕವಿಲ್ಲ ಭಯವಿಲ್ಲ
ದಶವಿಧದ ಪಾತಕಗಳಿಲ್ಲ ಸರ್ವಜ್ಞ ||
53. ಲಿಂಗವನು ಅಂದವನ | ಅಂಗ ಹಿಂಗಿರಬೇಕು |
ತೆಂಗನಕಾಯಿ ಪರಿಪೂರ್ಣ ಬಲಿದು ಜಲ |
ಹಿಂಗಿದಪ್ಪಂದ ಸರ್ವಜ್ಞ ||
54. ಅಂಗವನು ಲಿಂಗವನು | ಸಂಗೊಳಿಸಲೆಂತಕ್ಕು |
ಲಿಂಗದಾ ನೆನಹು ಫನವಾಗಿ ಶಿವಲಿಂಗ |
ಹಿಂಗಿದಪ್ಪಂದ ಸರ್ವಜ್ಞ ||
55. ಒಮ್ಮನದ ಶಿವಪೂಜೆ | ಗಮ್ಮನೇ ಮಾಡುವದು |
ಇಮ್ಮನವ ಪಿಡಿದು ಕೆಡಬೇಡ ವಿಧಿವಶವು |
ಸರಿಮ್ಮನೇ ಕೆಡಗು ಸರ್ವಜ್ಞ
56. ಅಷ್ಟವಿಧದರ್ಚನೆಯ | ನೆಷ್ಟು ಮಾಡಿದರೇನು ? |
ನಿಷ್ಠೆ ನೆಲೆಗೊಳದೆ ಭಜಿಸುವಾ ಪೂಜೆ ತಾ |
ನಷ್ಟ ಕಾಣಯ್ಯ ಸರ್ವಜ್ಞ ||
57. ಇಷ್ಟಲಿಂಗದಿ ಮನವ | ನೆಟ್ಟನೆಯ ನಿಲಿಸದಲೆ |
ಕಷ್ಟಭ್ರಮೆಗಳಲಿ ಮುಳುಗಿದನು ಕರ್ಮದಾ |
ಬಟ್ಟಿಗೆ ಹೋಹ ಸರ್ವಜ್ಞ ||
58. ಎಷ್ಟು ಬಗೆಯಾತಿಯ | ಮುಟ್ಟಿಸಿದ ಫಲವೇನು ? |
ನಿಷ್ಠೆಯಿಲ್ಲದವನ ಶಿವಪೂಜೆ ಹಾಳೂರ |
ಕೊಟ್ಟಗುರಿದಂತೆ ಸರ್ವಜ್ಞ ||
59. ಒಸೆದೆಂಟು ದಿಕ್ಕಿನಲ್ಲಿ | ಮಿಸುನಿ ಗಿಣ್ಣಲು ಗಿಂಡಿ |
ಹಸಿದು ಮಾಡುವನು ಪೂಜೆಯದು ಬೋಗಾರ |
ಪಸರ ವಿಟ್ಟಂತೆ ಸರ್ವಜ್ಞ ||
60. ಬತ್ತಿ ಹೆತ್ತುಪ್ಪವನು | ಹತ್ತಿಸಿದ ಫಲವೇನು ? |
ನಿತ್ಯ ನೆಲೆಗೊಳದೆ ಭಜಿಸುವಾ ಪೂಜೆ ತಾ |
ಹತ್ತಿಗೇಡೆಂದು ಸರ್ವಜ್ಞ ||
61. ಎಣಿಸುತಿರ್ಪುದುಬಾಯಿ | ಪೂಣರುತಿರ್ಪುದು ಬೆರಳು |
ಕ್ಷಣಕ್ಕೂಮ್ಮೆ ಒಂದನೆಣಿಸುವಾ ಜಪಕೊಂದು |
ಕಿಣಿಕೆಯುಂಟೆಂದ ಸರ್ವಜ್ಞ ||
62. ಎಣಿಸುತಿರ್ಪುದು ಬೆರ್ಳು |
ಗುಣಿಸುತಿರ್ಪುದು ಜಿಹ್ವೆ ಮನಹೋಗಿ ಹಲವ ನೆನೆದರದು ಹಾಳೂರ |
ಶುನಕನಂತಕ್ಕು ಸರ್ವಜ್ಞ ||
63. ಕೊಲುವ ಕೈಯೊಳು ಪೂಜೆ | ಮೆಲುವ ಬಾಲೊಳು ಮಂತ್ರ |
ಸಲೆ ಪಾಪವೆರೆದ ಮನದೊಳಗೆ ಪೂಜಿಪನೆ |
ಹೊಲೆಯ ಕಾಣಯ್ಯ ಸರ್ವಜ್ಞ ||
64. ಲಿಂಗಪೂಜಿಸುವಾತ | ಜಗಮಕ್ಕೆ ನೀಡಿದೊಡೆ |
ಲಿಂಗದಾ ಕ್ಷೇಮ ಫನವಾಗಿ ಆ ಲಿಂಗ |
ಹಿಂಗದಿರುತಿಹುದು ಸರ್ವಜ್ಞ ||
65. ಲಿಂಗಕ್ಕೆ ತೋರಿಸುತ | ನುಂಗವಾತನೇ ಕೇಳು |
ಲಿಂಗವುಂಬುವದೆ ? ಇದನರಿದು ಕಪಿಯೆ ನೀ |
ಜಂಗಮಕೆ ನೀಡು ಸರ್ವಜ್ಞ ||
66. ಲಿಂಗಪ್ರಸಾದವನು | ಅಂಗಕ್ಕೆ ಕೊಂಬುವರು |
ಗಂಗಾಳದೊಳಗೆ ಕೈತೊಳೆದು ಚಲ್ಲುವಾ |
ಮಂಗಗಳ ನೋಡು ಸರ್ವಜ್ಞ ||
67. ಹಲವನೋದಿದಡೇನು ? | ಚೆಲುವನಾದದಡೇನು |
ಕುಲವೀರನೆನಸಿ ಫಲವೇನು ? ಲಿಂಗದಾ |
ಒಲುಮೆ ಇಲ್ಲದಲೆ ಸರ್ವಜ್ಞ ||
68. ಓದುವಾದಗಳೇಕೆ | ಗಾದೆಯ ಮಾತೇಕೆ |
ವೇದ ಪುರಾಣವು ನಿನಗೇಕೆ ಲಿಂಗದಾ |
ಹಾದಿಯರಿಯದಲೆ ಸರ್ವಜ್ಞ ||
69. ಒಪ್ಪಾದ ನುಡಿಯೇಕೆ ? ಪುಷ್ಪವೇರಿಸಲೇಕೆ ? |
ಅರ್ಪಿತದ ಗೊಡವೆ ತನಗೇಕೆ ? ಲಿಂಗದಾ |
ನೆಪ್ಪನರಿಯದಗೆ ಸರ್ವಜ್ಞ ||
70. ಕಂಡವರ ಕಂಡು ತಾ | ಕೊಂದು ಲಿಂಗವ ಕಟ್ಟಿ |
ಕೊಡಾಡಲರಿಯದಧಮಂಗೆ ಲಿಂಗವದು |
ಕೆಂಡದಂತಿಹುದು ಸರ್ವಜ್ಞ ||
71. ಕಟ್ಟಲೂ ಬಿಡಲು ಶಿವ | ಬಿಟ್ಟಲವ ಕದ್ದನೇ |
ಕಟ್ಟಲೂ ಬೇಡಿ ಬಿಡಲೂ ಬೇಡಿ |
ಕಣ್ಣು ಮನ ನಟ್ಟರೆ ಸಾಕು ಸರ್ವಜ್ಞ ||
72. ಆ ದೇವ ಈ ದೇವ | ಮಹಾದೇವನೆನಬೇಡ |
ಆ ದೇವರ ದೇವ ಭುವನದಾ ಪ್ರಾಣಿಗಳಿ |
ಗಾದವನೇ ದೇವ ಸರ್ವಜ್ಞ ||
73. ಚಿತ್ರವನು ನವಿಲೊಲೆ ವಿ | ಚಿತ್ರವನು ಗಗನದೊಳು |
ಪತ್ರ ಪುಷ್ಪಗಳ ವಿವಿಧವರ್ಣಗಳಿಂದ |
ಚಿತ್ರಿಸಿದರಾರು ಸರ್ವಜ್ಞ ||
74. ಇಂಗಿನೊಳು ನಾತವನು | ತೆಂಗಿನೊಗೆಳೆ ನೀರು |
ಭ್ರಂಗ ಕೋಗಿಲೆಯ ಕಂಠದೊಳು ಗಾಯನವ |
ತುಂಬಿದವರಾರು ಸರ್ವಜ್ಞ ||
75. ಕಳ್ಳಿಯೊಳು ಹಾಲು, ಮುಳು | ಗಳ್ಳಿಯೊಳು ಹೆಜ್ಜೇನು |
ಎಳ್ಳಿನೊಳಗೆಣ್ಣೆ ಹನಿದಿರಲು, ಶಿವಲೀಲೆ
ಸುಳ್ಳೆನ್ನಬಹುದೆ ? ಸರ್ವಜ್ಞ ||
76. ಗುಡಿಯ ಬೋದಿಗೆ ಕಲ್ಲು |
ನಡುರಂಗ ತಾ ಕಲ್ಲು ಕಡೆಮೂಲೆ ಸೆರಗು ತಾ ಕಲ್ಲು ವರವನ್ನು |
ಕೊಡುವಾತ ಬೇರೆ ಸರ್ವಜ್ಞ ||
77. ಪ್ರಾಣನೂ ಪರಮಮನು | ಕಾಣದಲೆ ಒಳಗಿರಲು |
ಮಾಣದೇ ಸಿಲೆಯ ಹಿಡಿದದಕೆ ಮೂರ್ಖ, ತಾ |
ಪ್ರಾಣಾತ್ಮನೆಂಬ ಸರ್ವಜ್ಞ ||
78. ಕಲ್ಲು ಗುಂಡಿನ ಮೇಲೆ | ಮಲ್ಲಿಗೆಯ ಅರಳಿಕ್ಕಿ |
ನಿಲ್ಲದಲೆ ಹಣಿಯ ಬಡಿವರ್ಗ ಬುಗುಟಿಲ್ಲ |
ದಿಲ್ಲ ಕಾಣಯ್ಯ ಸರ್ವಜ್ಞ ||
79. ಉತ್ಪತ್ತಿಗೆ ಬೊಮ್ಮಗಡ | ಸ್ಥಿತಿಗೆ ವಿಷ್ಣು ಗಡ |
ಹತವ ಗೈವುದಕ್ಕೆ ರುದ್ರಗಣ, ಇವರುಗಳ |
ಸ್ಥಿತಿಯನರಿಯೆಂದು ಸರ್ವಜ್ಞ ||
80. ಬೊಮ್ಮನಿರ್ಮಿಪನೆಂಬ | ಮರ್ಮತಿಯ ನೀ ಕೇಳು |
ಬೊಮ್ಮನಾ ಸತಿಗೆ ಮೂಗಿಲ್ಲವಾಮೂಗ |
ನಿರ್ಮಿಸನದೇಕೆ ಸರ್ವಜ್ಞ ||
81. ಹುಟ್ಟಿಸುವನಜನೆಂಬ | ಕಷ್ಟದಾ ನುಡಿಬೇಡ |
ಹುಟ್ಟಿಪನು ತನ್ನ ಶಿರಹರಿಯೆ ಮತೋಂದು |
ಹುಟ್ಟಿಸನದೇಕೆ ? ಸರ್ವಜ್ಞ ||
82. ಹತ್ತು ಭವವನು ಎತ್ತಿ | ಎತ್ತು ಎಮ್ಮೆಯ ಕಾದ |
ಮತ್ತೆ ಪಾಂಡವರಿಗಾಳಾದ ಹರಿಯು ತಾ |
ನೆತ್ತಣಾ ದೈವ ಸರ್ವಜ್ಞ ||
83. ನರಸಿಂಹನವತಾರ |
ಹಿರಿದಾದ ಅದ್ಬುತವು |
ಶರಭನು ಗಿರಿಂದ ಕೊಲುವಾಗ ನರಿಯಂದವಾದ ಸರ್ವಜ್ಞ ||
84. ಪಾಲಿಲಿಸುವ ಹರಿಯು ತಾ | ಸೋಲನೆಂದನಬೇಡ |
ಶೂಲ ತಾ ಮಗನ ತಲೆ ಜಿಗುಟೆ ಹರಿ ಏಕೆ |
ಪಾಲಿಸದೆ ಹೋದ ಸರ್ವಜ್ಞ ||
85. ಕಲ್ಲು ಕಲ್ಲೆಂಬುವಿರಿ | ಕಲ್ಲೊಳಿರ್ಪುದೇ ದೈವ |
ಕಲ್ಲಲ್ಲಿ ಕಳೆಯನಿಲಿಸಿದಾ ಗುರುವಿನಾ |
ಸೊಲ್ಲೇದೈವ ಸರ್ವಜ್ಞ ||
86. ಉಣಬಂದ ಜಂಗಮಕೆ | ಉಣಬಡಿಸಲೂಲ್ಲದಲೆ |
ಉಣದಿಪ್ಪ ಲಿಂಗಕುಂಅಬಡಿಸಿ ಕೈಮುಗಿವ |
ಬಣಗುಗಳ ನೋಡು ಸರ್ವಜ್ಞ ||
87. ಆದಿ ದೈವವನು ತಾ | ಭೇದಿಸಲಿ ಕರಿಯದಲೆ |
ಹಾದಿಯಾಕಲ್ಲಿಗೆಡೆಮಾಡಿ ನಮಿಸುವಾ |
ಮಾದಿಗರ ನೋಡು ಸರ್ವಜ್ಞ ||
88. ತನ್ನಲಿಹ ಲಿಂಗವನು | ಮನ್ನಿ ಸಲಿಕರಿಯದಲೆ |
ಬಿನ್ನಣದ ಕಟಿಡ ಪ್ರತಿಮೆಗಳಿಗೆರಗುವಾ |
ಅನ್ಯಾಯ ನೋಡು ಸರ್ವಜ್ಞ ||
89. ಎಲ್ಲ ದೈವವ ಬೇಡಿ | ಹುಲ್ಲು ಬಾಯ್ತೆರೆಯದಲೆ |
ಬಲ್ಲ ದಾಶಿವನ ಭಜಸಿ ಬೇಡಿದಾತ |
ಇಲ್ಲೆನಲಿಕರಿಯ ಸರ್ವಜ್ಞ ||
90. ಭ್ರಷ್ಪದೈವಕ ಬಾಯಿ | ಬಿಟ್ಟಿಲ್ಲಿ ಫಲವಿಲ್ಲ |
ಸೃಷ್ಟಿಗೀಸ್ವರನ ಭಜಿಸಿದರೆ ಮುಂದಕ್ಕೆ |
ಇಷ್ಟಾರ್ಥವೀವ ಸರ್ವಜ್ಞ ||
91. ಹರಿ ಬೊಮ್ಮನೆಂಬವರು | ಹರನಿಂದಲಾದವರು |
ಅರಿಸಿಗೆ ಆಳು ಸರಿಯಹನೆ ಶಿವದಿಂದ |
ಮೆರೆವರಿನ್ನಾರು ಸರ್ವಜ್ಞ ||
92. ಹಿರಿಯ ಬೊಮ್ಮನು ಕೆಂಚ | ಕಿರಿಯ ಹರಿ ತಾ ಕರಿಗ |
ಪುರಹರನು ಶುದ್ಧ ಧವಳಾಂಕನಿವರುಗಳು |
ಸರಿಯೇ ದೈವ್ಕ್ಕೆ ಸರ್ವಜ್ಞ ||
93. ಹರಿಯಲೆಯು ಬೊಮ್ಮಂಗೆ | ಕುರಿದಲೆಯು ದಕ್ಷಂಗೆ |
ನೆರೆಹತ್ತು ಜನನವಾಹರಿಗೆ ಇವರುಗಳು |
ಸರಿಯಹರೆ ಸರ್ವಜ್ಞ ||
94. ಧರೆಯ ತೇರನು ಮಾಡಿ | ಅಜನ ಸಾರಧಿ ಮಾಡಿ |
ಹರಿಯ ಶರವಮಾಡಿ ತ್ರಿಪುರವನು ಆಳಿದಂತೆ |
ಸರಿಯಾರು ಹೇಳಿ ಸರ್ವಜ್ಞ ||
95. ಇಂದ್ರನಾನೆಯನೇರಿ ಒಂದನೂ ಕೋಡಲೆರಿಯ |
ಚಂದ್ರಶೇಖರನು ಮುದಿಯೆತ್ತನೇರಿ |
ಬೇಕೆಂದುದನು ಕೊಡುವ ಸರ್ವಜ್ಞ ||
96. ಉಂಬಳಿಯ ಇದ್ದವರ | ಕಂಬಳಿಯ ಹೊದೆಯುವರೆ |
ಶಂಭುವಿದ್ದಂತೆ ಮತ್ತೊಂದು ದೈವವನು |
ನಂಬುವನೆ ಹೆಡ್ಡ ಸರ್ವಜ್ಞ ||
97. ಸುರತರವು ಸುರಧೇನು | ಸರಮಣಿಯು ಸುರಲತೆಯು |
ಪುರುಷರುತ್ತಮನ ಹರಿಯಾಗಿ ಇವರುಗಳು |
ಪರಮ ನಿಂದಾದ್ದು ಸರ್ವಜ್ಞ ||
98. ದೇಶಕ್ಕೆ ಸಜ್ಜನನು | ಹಾಸ್ಯಕ್ಕೆ ಹನುಮಂತ |
ಕೇಶವನೆಕ್ತ ಎಲ್ಲರಲಿ ಮೂರು ಕ |
ಣ್ಣೀರನೇ ದೈವ ಸರ್ವಜ್ಞ ||
99. ಹರನವನ ಕೊಲುವಂದ | ಎರಳೆಯನು ಎಸೆವಂದು |
ಮರಳಿ ವರಗಳನು ಕೊಡುವಂದು ಪುರಹರಗೆ |
ಸರಿಯಾದ ಕಾಣೆ ಸರ್ವಜ್ಞ ||
100. ಷಡುದರುಶನಾದಿಗಳು ಮೃಡಮಾಡಲಾದವೈ |
ಪೊಡ ಮಡುತ ನಿಗಮಗಳರೆಸುವ ಅಭವನಾ |
ಗಡಣಕೆಗೆ ಯಾರು ಸರ್ವಜ್ಞ ||
ಸರ್ವಜ್ಞನ ಈ ತ್ರಿಪದಿ ವಚನಗಳು ಕೇವಲ ಸಾಹಿತ್ಯಿಕ ಕೃತಿಗಳಲ್ಲ, ಅವು ಜೀವನದ ಪಾಠಗಳ ಖಜಾನೆಯಾಗಿವೆ. ಈ ವಚನಗಳು ನಮ್ಮನ್ನು ನಮ್ಮ ದೈನಂದಿನ ಜೀವನದ ಬಗ್ಗೆ ಆಳವಾಗಿ ಯೋಚಿಸಲು ಪ್ರೇರೇಪಿಸುತ್ತವೆ ಮತ್ತು ನಮ್ಮ ನೈತಿಕ ದೃಷ್ಟಿಕೋನವನ್ನು ವಿಸ್ತರಿಸುತ್ತವೆ. ನೀವು ಕನ್ನಡ ಸಂಸ್ಕೃತಿ ಮತ್ತು ಸಾಹಿತ್ಯದ ಕುರಿತು ಇನ್ನಷ್ಟು ಓದಲು ಬಯಸಿದರೆ, ನಮ್ಮ ಕನ್ನಡ ನುಡಿಮುತ್ತುಗಳು ಮತ್ತು ಕನ್ನಡ ಹೊಸ ವರ್ಷದ ಶುಭಾಶಯಗಳು ಕೂಡ ನೋಡಬಹುದು. ಈ ವಚನಗಳನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಿ ಅಥವಾ ನಿಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ. ನೆನಪಿಡಿ, ಸರ್ವಜ್ಞನ ವಚನಗಳು ಕೇವಲ ಓದಲು ಅಲ್ಲ, ಅವುಗಳನ್ನು ಅನುಭವಿಸಲು ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಲು – ಆದ್ದರಿಂದ ಈ ವಚನಗಳಿಂದ ಪ್ರೇರಣೆ ಪಡೆದು ನಿಮ್ಮ ಜೀವನವನ್ನು ಮತ್ತಷ್ಟು ಅರ್ಥಪೂರ್ಣ ಮತ್ತು ನೈತಿಕವಾಗಿ ಮಾಡಿಕೊಳ್ಳಿ.